ಇಸ್ರೇಲ್ ಹಾಗೂ ಇರಾನ್ ನಡುವಿನ ತೀವ್ರ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಇಸ್ರೇಲ್ ತನ್ನ “ಆಪರೇಶನ್ ರೈಸಿಂಗ್ ಲಯನ್” ಎಂಬ ಹೆಸರಿನ ತೀವ್ರ ವಾಯುದಾಳಿ ನಡೆಸಿದ ನಂತರ, ಇರಾನ್‌ನ ಹಲವು ನ್ಯೂಕ್ಲಿಯರ್ ಕೇಂದ್ರಗಳು ಹಾಗೂ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿತು.
ಈ ಯುದ್ಧದ ನಡುವೆ ಬ್ರೆಂಟ್ ಕಚ್ಚಾ ತೈಲದ ಬೆಲೆ 13% ರಷ್ಟು ಏರಿಕೆಯಾಗಿದ್ದು $78.25 ಡಾಲರ್ ಪ್ರತಿ ಬ್ಯಾರೆಲ್‌ಗೆ ತಲುಪಿದೆ, ಹಾಗೂ ಯುಎಸ್ ವೆಸ್ಟ್ ಟೆಕ್ಸಸ್ ಇಂಟರ್ಮೀಡಿಯೇಟ್ (WTI) ತೈಲವೂ $77.21 ಡಾಲರ್ ಮಟ್ಟಕ್ಕೆ ಏರಿದೆ.
ಜೂನ್ 13 ಮತ್ತು 14ರಂದು ಇಸ್ರೇಲ್ ರಕ್ಷಣಾ ಪಡೆ ಇರಾನ್ ನ ಪ್ರಮುಖ ಸೈನಿಕ ಹಾಗೂ ಅಣುಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. ಈ ದಾಳಿಯಿಂದ ತೈಲ ಮತ್ತು ಅನಿಲ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಜಾಗತಿಕ ಪೂರೈಕೆಯಲ್ಲಿ ಅಸ್ಥಿರತೆ ಉಂಟಾಗಿದೆ.
ಭಾರತ ತನ್ನ ತೈಲದ 85% ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇನ್ನು ಮುಂದೆ ಯುದ್ಧ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ, ತೈಲದ ದರ ಇನ್ನಷ್ಟು ಏರಿಕೆಯಾಗುವುದು ಖಚಿತ. ಸೌದಿ ಅರೇಬಿಯಾ, ಯುಎಇ ಮತ್ತು ಅಮೆರಿಕದ ತುರ್ತು ಸಂವಹನ ಪ್ರಯತ್ನಗಳು ಈ ಉದ್ವಿಗ್ನತೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿದೆ.
ಇದೀಗ ತೈಲ ಕಂಪನಿಗಳು ಬಡ್ಡಿದರ, ಆಮದು ವೆಚ್ಚದ ಒತ್ತಡದಲ್ಲಿದ್ದು, ಹತ್ತಿರದ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸಣ್ಣ ಮಟ್ಟದ ಏರಿಕೆಗೆ ಸಾಧ್ಯತೆ ಇದೆ ಎನ್ನಲಾಗಿದೆ.