20 June 2025 | Join group

ರಾಕೆಟ್ ದಾಳಿ ವೇಳೆ ನ್ಯೂಸ್ ಆ್ಯಂಕರ್ ಲೈವ್: ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿವು

  • 17 Jun 2025 01:44:44 AM

ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗಿರುವ ಉದ್ವಿಗ್ನತೆ ಮುಂದುವರಿದಿದೆ. ಇಸ್ರೇಲ್ ತನ್ನ “ಆಪರೇಶನ್ ರೈಸಿಂಗ್ ಲಯನ್” ಎಂಬ ಹೆಸರಿನ ತೀವ್ರ ವಾಯುದಾಳಿ ನಡೆಸಿದ ನಂತರ, ಇರಾನ್‌ನ ಹಲವು ನ್ಯೂಕ್ಲಿಯರ್ ಕೇಂದ್ರಗಳು ಹಾಗೂ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿತು.

 

ಪ್ರತಿಕಾರವಾಗಿ ಇರಾನ್ ಕೂಡ ಇಸ್ರೇಲ್ ನ ಟೆಲ್ ಅವಿವ್ ಮೇಲೆ ದಾಳಿ ನಡೆಸಿದ್ದು ಸ್ವಲ್ಪ ಮಟ್ಟದ ಹಾನಿ ಸಂಭವಿಸಿದೆ ಎಂದು ಮಾಧ್ಯಮ ವರದಿಯಾಗಿದೆ. ಈ ಮಧ್ಯೆ ಇದೀಗ ಇರಾನ್ ನ್ಯೂಸ್ ಚಾನೆಲ್ ಆದ 'ಇರಾನ್ಸ್ ಸ್ಟೇಟ್ ಟಿವಿ ಮಿಡ್' ಎಂಬ ಟಿವಿ ಎಂಬ ಮಾಧ್ಯಮದಲ್ಲಿ ಮಹಿಳಾ ಟಿವಿ ಆ್ಯಂಕರ್ ಈ ಸಂಘರ್ಷದ ಬಗ್ಗೆ ಮಾತನಾಡುತ್ತಿದ್ದಾಗ ನಡೆದ ಘಟನೆ ಈಗ ಭಾರಿ ವೈರಲ್ ಆಗುತ್ತಿದೆ.

 

ಆ ಮಹಿಳಾ ಟಿವಿ ಆ್ಯಂಕರ್ ಇಸ್ರೇಲ್ ಬಗ್ಗೆ ತೀವ್ರ ಭಾಷೆಯಲ್ಲಿ ಮಾತುಕತೆ ನಡೆಸುತ್ತಿದ್ದಾಗ  ಒಂದೇ ಸವನೆ ಮೇಲಿಂದ ರಾಕೆಟ್ ದಾಳಿಯಾಗಿದ್ದು ನ್ಯೂಸ್ ರೂಮ್ ಕಟ್ಟಡದ ಮೇಲ್ಚಾವಣಿ ಪುಡಿ ಪುಡಿಯಾಗಿ ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಇದಾದ ಕೂಡಲೇ ಮತ್ತೊಬ್ಬ ವ್ಯಕ್ತಿ ದೇವರ ಹೆಸರಿನಿಂದ ಕಿರಿಚಾಡುವುದನ್ನು ಕೂಡ ಕೇಳಲಾಗುತ್ತದೆ. ಇರಾನ್ ಸ್ಟೇಟ್ ಟಿವಿಯ ಪ್ರಸಾರ ದೃಶ್ಯ ಈ ಘಟನೆ ಉಲ್ಲೇಖಿಸುತ್ತಿದೆ. ಇದೀಗ ಕೆಚ್ಚದೆಯ ನ್ಯೂಸ್ ಸುದ್ದಿ ನಿರೂಪಕಿ ಎಂದು ಇರಾನ್ ನ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.