23 June 2026 |

ಮುಂಬೈಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ದಕ್ಷಿಣ ಕನ್ನಡದ ಕಾಂಗ್ರೆಸ್ ಮುಖಂಡನ ಸಾವು

  • 17 Jun 2025 12:44:37 PM

ಮೂಡಬಿದರೆ: ಮುಂಬೈಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಮೂಡಬಿದರೆ ಯುವಕ ಶಶಿ ಕೋಟ್ಯಾನ್(32) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

 

ಇವರು ಮೂಡಬಿದರೆ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಎಂದು ತಿಳಿದುಬಂದಿದೆ.

 

ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಶಶಿ ಕೋಟ್ಯಾನ್, ಜೂನ್ 16 ರಂದು ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಇವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಎದ್ದಿವೆ ಎನ್ನಲಾಗಿದೆ.

 

ಹೆಚ್ಚಿನ ಮಾಹಿತಿಗಾಗಿ ಕುಟುಂಬ ಸದ್ಯಸರು ಈಗಾಗಲೇ ಮುಂಬೈಗೆ ತೆರಳಿದ್ದು, ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿಯಲಿದೆ.