ಕೊಚ್ಚಿಯಿಂದ ದೆಹಲಿ ಮಾರ್ಗದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿರುವ ಕಾರಣ ಅರ್ಧದಲ್ಲಿ ಭೂಸ್ಪರ್ಶ ಮಾಡಲಾಗಿದೆ. ಕೊಚ್ಚಿಯಿಂದ ಇಂದು ಬೆಳಗ್ಗೆ 9.20ಕ್ಕೆ ಹೋರಾಟ ಇಂಡಿಗೋ ವಿಮಾನವನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ವಿಮಾನ ಸಂಖ್ಯೆ 6E2706 ಬೆಳಿಗ್ಗೆ 9.20ಕ್ಕೆ ಹೊರಟ ಈ ವಿಮಾನವು ಮಧ್ಯಾಹ್ನ 12.35ಕ್ಕೆ ದೆಹಲಿಯಲ್ಲಿ ಇಳಿಯಬೇಕಾಗಿತ್ತು. ಆದರೆ ಇದ್ದಕ್ಕಿದ್ದಂತೆ ಈ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಬಂದ ತಕ್ಷಣ, ವಿಮಾನವನ್ನು ಮಹಾರಾಷ್ಟ್ರದ ನಾಗ್ಪುರದ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಈ ಕರೆ ಬರುವ ಮೊದಲೇ ವಿಮಾನ ಕೊಚ್ಚಿ ಏರ್ ಪೋರ್ಟ್ ನಿಂದ ಟೇಕ್ ಆಫ್ ಆಗಿತ್ತು. ವಿಮಾನದ ನಂಬರ್ ನಮೂದಿಸಿದಿ ಇಮೇಲ್ ಮಾಡಲಾಗಿದ್ದು, ವಿಮಾನದ ಒಳಗಡೆ ಬಾಂಬ್ ಇಡಲಾಗಿದೆ ಎಂದು ಬರೆಯಲಾಗಿತ್ತು.
ಇದೀಗ ವಿಮಾನವನ್ನು ಸುರಕ್ಷಿತವಾಗಿ ಡಾ. ಬಾಬಾಸಾಹೇಬ್ ಇಂಟರ್ನ್ಯಾಷನಲ್ ಏರ್ಪೋರ್ಟ್, ನಾಗಪುರದಲ್ಲಿ ಭೂಸ್ಪರ್ಶ ಮಾಡಿ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (Bomb detection and Disposal squad) ಮೂಲಕ ಪರಿಶೀಲನೆ ಮಾಡಿಲಾಯಿತು. ಯಾವುದೇ ಅಪಾಯಗಳ ಬಗ್ಗೆ ವರದಿಯಾಗಿಲ್ಲ.