19 June 2025 | Join group

ಮಂಗಳೂರಿನಲ್ಲಿ ಭಾರತದ ಎರಡನೇ ಅತೀ ದೊಡ್ಡ ಎಲ್‌ಪಿಜಿ (LPG) ಸಂಗ್ರಹಣಾ ಘಟಕ

  • 17 Jun 2025 09:59:12 PM

 Image credit: MEIL @ meil.in

ಮಂಗಳೂರು: ಭಾರತದ ಎರಡನೇ ಅತೀ ದೊಡ್ಡ ಎಲ್‌ಪಿಜಿ ಶೇಖರಣಾ ಘಟಕ ಮಂಗಳೂರಿನಲ್ಲಿ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಯೋಜನೆಯನ್ನು ಮೇಘಾ ಇಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ನಿರ್ಮಿಸಿದೆ.

 

'ಇದು ನಮಗೆ ಒಂದು ಪ್ರಮುಖ ಸಾಧನೆಯಾಗಿದೆ. ಎಲ್ಲಾ ಪರೀಕ್ಷೆಗಳು ಜೂನ್ 6, 2025 ರಂದು ಯಶಸ್ವಿಯಾಗಿ ಮುಕ್ತಾಯಗೊಂಡವು. ಭಾರತದ ಇಂಧನ ಭವಿಷ್ಯಕ್ಕೆ ಪ್ರಮುಖವಾದ ದೊಡ್ಡ ಸಂಕೀರ್ಣ ಕಟ್ಟಡ ಕೆಲಸಗಳನ್ನು MEIL ಎಷ್ಟು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದನ್ನು ಈ ಯೋಜನೆ ತೋರಿಸುತ್ತದೆ ಎಂದು ಸಂಸ್ಥೆ ವಿಡಿಯೋ ತುಣುಕು ಗಳನ್ನು ಪೋಸ್ಟ್ ಮಾಡುವ ಮೂಲಕ ಬರೆದಿದೆ.

ಗುಹೆಯಂತಿರುವ ಈ ಘಟಕ ವಿಶೇಷ ಏಕೆಂದರೆ ಇದು ಭಾರತದ ಎರಡನೇ LPG ಸಂಗ್ರಹಣಾ ಘಟಕವಾಗಿದೆ. ಇದುವರೆಗಿನ ಅತಿದೊಡ್ಡದಾಗಿದ್ದು, 80,000 ಮೆಟ್ರಿಕ್ ಟನ್ LPG ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಯೋಜನೆಯ ಈಗಾಗಲೇ ಎಲ್ಲಾ ಪರೀಕ್ಷೆಯನ್ನು ಮೇ 9, 2025 ರಿಂದ ಜೂನ್ 6, 2025 ರವರೆಗೆ ನಡೆಸಿರುತ್ತಾರೆ.

ಈ ಘಟಕವು(ಗುಹೆ) 1,220 ಮೀಟರ್ ಮತ್ತು 225 ಮೀಟರ್ ಉದ್ದದ ಎರಡು ದೊಡ್ಡ ನೆಲದಡಿ ಸುರಂಗಗಳನ್ನು ಒಳಗೊಂಡಿದೆ. ಇದು ಸಮುದ್ರ ಮಟ್ಟಕ್ಕಿಂತ 156 ಮೀಟರ್ ಕೆಳಗೆ ಇದ್ದು, ಪರಿಣಾಮಕಾರಿ ಇಂಧನ ಸಂಗ್ರಹಣೆಗೆ ಅನುವು ಮಾಡಿಕೊಡುತ್ತದೆ.