1941ರ ಮತ್ತು 2025ರ ಕ್ಯಾಲೆಂಡರ್ ಹೋಲಿಕೆ, ಮತ್ತೆ ಯುದ್ಧದ ಛಾಯೆ! : ಸಾಮಾಜಿಕ ತಾಣದಲ್ಲಿ ಭಾರಿ ಚರ್ಚೆ

  • 19 Jun 2025 12:56:30 AM

1941ನೇ ವರ್ಷ, ವಿಶ್ವದ ಇತಿಹಾಸದಲ್ಲಿ ಅತಿ ಹೆಚ್ಚು ಸಂಚಲನ ಮೂಡಿಸಿದ ವರ್ಷಗಳಲ್ಲಿ ಒಂದಾಗಿದ್ದು, ವರ್ಷದ ಅಂತಿಮದಲ್ಲಿ ದ್ವಿತೀಯ ಮಹಾಯುದ್ಧ ಭಾರಿ ಉಗ್ರತೆಯ ಹಂತ ತಲುಪಿತ್ತು. ಈ ವರ್ಷದಲ್ಲಿ ಹಲವು ಪ್ರಮುಖ ರಾಜಕೀಯ ಘಟನೆಗಳು, ವೈಜ್ಞಾನಿಕ ಪ್ರಗತಿಗಳು ಹಾಗೂ ನಿಖರವಾದ ತಿರುವುಗಳೇ ಸಂಭವಿಸಿದ್ದವು.

 

2025 ರ ಕ್ಯಾಲೆಂಡರ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ 'ಇತಿಹಾಸ ತನ್ನನ್ನು ತಾನೇ ಪುನರಾವರ್ತಿಸಲಿದೆ' ಎಂಬ ಚರ್ಚೆ ನಡೆದಿದೆ. ಯಾಕೆಂದರೆ 1941ರ ಕ್ಯಾಲೆಂಡರ್ ಮತ್ತು 2025ರ ಕ್ಯಾಲೆಂಡರ್ ಒಂದಕ್ಕೊಂದು ಸಂಪೂರ್ಣವಾಗಿ ಹೋಲಿಕೆಯಾಗುತ್ತಿದೆ. 2025ರ ಕ್ಯಾಲೆಂಡರ್ ನಲ್ಲಿ ಇರುವ ಪ್ರತಿಯೊಂದು ತಿಂಗಳಿನ ದಿನವೂ 1941ರ ಕ್ಯಾಲೆಂಡರ್ ನಲ್ಲಿ ಇದ್ದಂತೆಯೇ ಇದೆ.

 

19421 ರಲ್ಲಿ ನಡೆದ ಪ್ರಮುಖ ವಿದ್ಯಮಾನಗಳು

ಜೂನ್ 22, 1941: ನಾಜಿ ಜರ್ಮನಿ "ಆಪರೇಶನ್ ಬಾರ್ಬರೋಸಾ" ಎಂಬ ಹೆಸರಿನಲ್ಲಿ ಸೋವಿಯತ್ ಯೂನಿಯನ್ ಮೇಲೆ ದಾಳಿ ನಡೆಸಿತು. ಇದು ಯುದ್ಧದ ದೊಡ್ಡ ತಿರುವುಗಳಲ್ಲೊಂದು.

ಡಿಸೆಂಬರ್ 7, 1941: ಜಪಾನ್ ದೇಶವು ಅಮೆರಿಕದ ಪರ್ಳ್ ಹಾರ್ಬರ್ ನೌಕಾ ನೆಲೆಯಲ್ಲಿ ದಾಳಿ ನಡೆಸಿತು. ಇದರಿಂದಾಗಿ ಅಮೆರಿಕಾ ದ್ವಿತೀಯ ಮಹಾಯುದ್ಧಕ್ಕೆ ಅಧಿಕೃತವಾಗಿ ಪ್ರವೇಶಿಸಿತು.

 

1941 ಮತ್ತೊಮ್ಮೆ ಮರುಕಳಿಸಲಿದೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು, ಇರಾನ್ ಮತ್ತು ಇಸ್ರೇಲ್ ಉದ್ವಿಗ್ನತೆ ಬಗ್ಗೆ ಗುರಿಯಾಗಿಸಿಕೊಂಡು ಈ ರೀತಿಯ ಊಹಾಪೋಹಗಳು ಹರಿದಾಡುತ್ತಿವೆ.