02 February 2026 | Join group

ಮಂಗಳವಾರ (23-9-2025): ದ.ಕ ಮತ್ತು ಕಾಸರಗೋಡು ಇಂದಿನ ಹವಾಮಾನ

  • 23 Sep 2025 11:39:07 AM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್

 

ನಿನ್ನೆ ವರದಿ ಮಾಡಿದಂತೆ, ಕಾಸರಗೋಡು ದ.ಕ.ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸಾಧಾರಣ ಮಳೆಯಾಗಿತ್ತು.

 

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಹಗಲು ಆಗಾಗ ತುಂತುರು - ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ಮತ್ತು ದ.ಕ ಜಿಲ್ಲೆಗಳಲ್ಲಿ ಬೆಳಿಗ್ಗೆ ಮೋಡದ ವಾತಾವರಣ ಇರಲಿದ್ದು, ಮಧ್ಯಾಹ್ನದ ಮೊದಲು ಕಾಸರಗೋಡು ಗಡಿಪ್ರದೇಶಗಳಲ್ಲಿ ಸುಳ್ಯ ಸುತ್ತಮುತ್ತ, ಪುತ್ತೂರು, ಬಂಟ್ವಾಳ ತಾಲ್ಲೂಕುಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ರಾತ್ರಿಯೂ ಹೆಚ್ಚಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗಬಹುದು.

 

ಉಡುಪಿ, ಉ.ಕ ಜಿಲ್ಲೆಗಳಲ್ಲಿಯೂ ಮೋಡದ ವಾತಾವರಣ ಇರಲಿದ್ದು, ಉಡುಪಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯ ಸಾಧ್ಯತೆ ಮತ್ತು ಉ.ಕ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ.

 

ಬಂಗಾಳಕೊಲ್ಲಿಯ ವಾಯುಭಾರಕುಸಿತದ ಕಾರಣದಿಂದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 30 ತನಕ ಮೋಡ - ಸಾಮಾನ್ಯ ಮಳೆ ಮುಂದುವರೆಯಲಿದೆ.