01 February 2026 | Join group

ಇಂದಿನ ಹವಾಮಾನ: ದ.ಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ

  • 28 Sep 2025 11:22:45 AM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್

 

ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆಯಾಗಿದ್ದು  ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿತ್ತು.

 

ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ದ.ಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಇವತ್ತೂ ಆಗಾಗ ಮಳೆ ಮುಂದುವರೆಯಬಹುದು. ಮಂಗಳೂರು, ಉಡುಪಿ ಉ.ಕ ಕರಾವಳಿ ತೀರದ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಲಿದ್ದು ಉಳಿದ ಎಲ್ಲಾ ಪ್ರದೇಶಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.  ನಾಳೆಯಿಂದ ಮಳೆ ಪ್ರಮಾಣ ಸ್ವಲ್ಪ ಕಡಿಮೆ ಆಗಲಿದ್ದು ಅಕ್ಟೋಬರ್ 5 ತನಕ ಪ್ರತಿದಿನ ಒಂದೆರಡು ಸಾಮಾನ್ಯ ಮಳೆ ಮುಂದುವರೆಯಲಿದೆ.

 

ಮಧ್ಯಪ್ರದೇಶ ಮಹಾರಾಷ್ಟ್ರ ಗಡಿಯಲ್ಲಿರುವ ವಾಯುಭಾರಕುಸಿತದ ತಿರುಗುವಿಕೆಯು ನಾಳೆ ಬೆಳಿಗ್ಗೆ ಮಹಾರಾಷ್ಟ್ರ -ಗುಜರಾತ್ ಗಡಿಭಾಗಗಳ ಮೂಲಕ ಅರಬ್ಬೀಸಮುದ್ರ ತಲುಪಿ ಪ್ರಬಲ ಆಗಬಹುದು.  ಇದು ಪಶ್ಚಿಮಕ್ಕೆ ಚಲಿಸಲಿದ್ದು  ಅಕ್ಟೋಬರ್  ಮೊದಲ ವಾರದ ನಂತರ ದುರ್ಬಲ ಆಗಲಿದ್ದು    ನಂತರ  ದಕ್ಷಿಣ ಭಾರತದಲ್ಲಿ ಮುಂಗಾರು ಮಾರುತಗಳು ಕಡಿಮೆ ಆಗಲಿದೆ. ಅಕ್ಟೋಬರ್ 1ರ ಅಂದಾಜು ನಂತರ ಬಂಗಾಳಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರಕುಸಿತ ಆಗುವ ಮುನ್ಸೂಚನೆ ಇದೆ.